
ವಿದ್ಯಾಭ್ಯಾಸ: ಎಂ.ಬಿ.ಬಿ.ಎಸ್., ಎಂ.ಎಸ್., ಎಫ್.ಐ.ಎ.ಎಂ.ಎಸ್., ಎಫ್.ಐ.ಎ.ಎಂ.ಎಸ್., ಎಂ.ಆರ್.ಎಸ್.ಹೆಚ್. (ಲಂಡನ್) ಮತ್ತು ಇ.ಎಂ.ಬಿ.ಎ. (ಆಸ್ಪತ್ರೆ ನಿರ್ವಹಣೆ),
ಡಾ. ಟಿ. ಹೆಚ್. ಆಂಜನಪ್ಪ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸೇವೆಯ ಮೂಲಕ ಮಾದರಿಯಾಗಿರುವ ಸಾಧಕರು. ಸಾವಿರಾರು ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಜೀವರಕ್ಷಿಸಿದ ಧನ್ವಂತರಿ.
ವೈದ್ಯಕೀಯ, ಸಮಾಜ ಸೇವೆ, ಉಪನ್ಯಾಸ, ಆರೋಗ್ಯ ಶಿಬಿರಗಳ ಸಂಘಟನೆಯಲ್ಲಿ ಮೈಲಿಗಲ್ಲು ನಿರ್ಮಿಸಿರುವ ಅಪರೂಪದ ವೈದ್ಯರು. ಮೂರೂವರೆ ದಶಕಗಳಿಂದಲೂ ವೈದ್ಯಕೀಯ ಸೇವೆಯಲ್ಲಿ ಅನವರತರಾಗಿರುವ ಡಾ. ಟಿ. ಹೆಚ್. ಆಂಜನಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಪೇಗೌಡ ಆಸ್ಪತ್ರೆಗಳಲ್ಲಿ ದುಡಿದವರು.
35 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವಿಶಿಷ್ಟ ದಾಖಲೆ ಅವರದ್ದು. ಬಡರೋಗಿಗಳಿಗೆ ಉಚಿತ ಚಿಕಿತ್ಸೆ, 700ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, 900ಕ್ಕೂ ಅಧಿಕ ಆರೋಗ್ಯ ಕುರಿತ ಉಪನ್ಯಾಸ, ಕರ್ನಾಟಕ ಕ್ಯಾನ್ಸರ್ ಸಂಸ್ಥೆಯಿಂದ ನಿರಂತರ ಸಮಾಜ ಸೇವೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನೇಕ ಕಾಲೇಜು-ಸಂಘ-ಸಂಸ್ಥೆಗಳಲ್ಲಿ ಅರ್ಬುದ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಡಾ. ಆಂಜನಪ್ಪ ಅವರ ಬಹುಮುಖಿ ಸೇವೆ-ಸಾಧನೆಗೆ ಹಿಡಿದ ಕೈಗನ್ನಡಿ. ಹತ್ತಾರು ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಆಂಜನಪ್ಪ ವೈದ್ಯ ಲೋಕದ ಮೇರು ಕಳಶ.
ವೃತ್ತಿ: ನಿವೃತ್ತ ಪ್ರೊಫೆಸರ್, ಆಫ್ ಸರ್ಜರಿ, ಮಾಜಿ ವೈದ್ಯಕೀಯ ಸೂಪರಿಂಟಿನ್‌ಡೆಂಟ್, ಕಿಮ್ಸ್ ಮಹಾವಿದ್ಯಾಲಯ, ಬೆಂಗಳೂರು, ಮಾಜಿ ಪ್ರೊಫೆಸರ್ ಅಂಡ್ ಹೆಡ್ ಎಮರ್ಜನ್ಸಿ ಮೆಡಿಸಿನ್, ಪಿ.ಇ.ಎಸ್., ಐ.ಎಮ್.ಎಸ್.ಆರ್, ಕುಫ್ಫಂ, ಡೀನ್ ಮತ್ತು ಪ್ರಾಂಶುಪಾಲರು, ಸಂಭ್ರಮ್ ವೈದ್ಯಕೀಯ ಕಾಜೇಜು, ಪ್ರೊಫೆಸರ್ ಮತ್ತು ಮುಖ್ಯಸ್ತರ ಸಪ್ತಗೀರಿ ವೈದ್ಯಕೀಯ ಕಾಜೇಜು. ಪ್ರೊಫೆಸರ್ ಆಕಾಶ್ ವೈದ್ಯಕೀಯ ಕಾಜೇಜು.
ಪ್ರವೃತ್ತಿ: ಕಲೆ, ಸಾಹಿತ್ಯ, ಸಂಗೀತ, ಗ್ರಾಮೀಣ ಕ್ರೀಡೆ, ಸಮಾಜ ಸೇವಾ ಸ್ಪಂದನಕ್ಕೆ ಸಕ್ರಿಯವಾಗಿ ಭಾಗವಹಿಸುವಿಕೆ.
ಹವ್ಯಾಸ: ಚರ್ಚಾಕೂಟ, ಹಾಸ್ಯಕೂಟ, ವೈದ್ಯಕೀಯ ವಿಷಯದಲ್ಲಿ ಲೇಖನಗಳ ಬರವಣಿಗೆ, ಗ್ರಾಮೀಣ ಕಲೆಗೆ ಪ್ರೋತ್ಸಾಹ ಸಕ್ರಿಯವಾಗಿ ಭಾಗವಹಿಸುವಿಕೆ.
ಡಾ. ಆಂಜನಪ್ಪನವರು 1955ರ ಜೂನ್ 1ರಂದು ದೊಡ್ದಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರು ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು . ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಡೊಡ್ಡಬಳ್ಳಾಪುರದಲ್ಲಿ ಮಾಧ್ಯಮಿಕ ಮತ್ತು ಫೌಡ ಶಿಕ್ಷಣ ಪಡೆದರು. ಬಸವನಗುಡಿ ನ್ಯಾಷನಲ್ ಕಾಜೇಜಿನಲ್ಲಿ ಪಿಯುಸಿ, ಬಳ್ಳಾರಿಯ ಸರ್ಕಾರಿ ವೈದಕೀಯ ಕಾಲೇಜಿನಲ್ಲಿ ಎಂ.ಬಿ.ಬಿಎಸ್ ತೇರ್ಗಡೆಯಾದರು. ಬಳಿಕ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ಎಂ.ಎಸ್.ನಲ್ಲಿ ಶಸ್ತ್ರಚಿಕಿತ್ಸಾ ಪರಿಣತಿ ಹೊಂದಿದರು. 1982ರಲ್ಲಿ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿ ವೃತ್ತಿ ಆರಂಭಿಸಿದರು.
1982ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸರ್ಜನ್ ಆಗಿ ವೃತ್ತಿ ಆರಂಭಿಸಿದರು. ನಂತರ 1983 ರಿಂದ 1987ರವರೆಗೆ ಹೆಸರಾಂತ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಅನಂತರ 1994ರವರೆಗೆ ಜಯನಗರದಲ್ಲಿರುವ ಜಯನಗರ ಜನರಲ್ ಆಸ್ಪತ್ರೆಯ ಸರ್ಜನ್ ಆಗಿ ಅನೇಕ ಕ್ಲಿಷ್ಟ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.
1994ರಿಂದ ಇಲ್ಲಿಯವರೆಗೆ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸರ್ಜನ್ ಹಾಗೂ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸಿದ್ಧಿ ಗಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ವೈದ್ಯಕೀಯ ಸೂಪರಿಂಟೆಂಡೆಂಟ್ ಆಗಿ ಸಮಸ್ತ ಆಸ್ಪತ್ರೆಯ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಂತರ ಸಂಭ್ರಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಡೀನ್ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಪ್ತಗಿರಿ ವೈದ್ಯಕೀಯ ಕಾಲೇಜು, ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಕಾಶ್ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೈತಾಪಿ ಕುಟುಂಬದಲ್ಲಿ ಜನಿಸಿ ವೈದ್ಯರಾಗಿರುವುದರಿಂದ ಹಳ್ಳಿಗಾಡಿನ ರೋಗಿಗಳ ಬಗ್ಗೆ ವಿಶೇಷ ಕಾಳಜಿ ದೀನದಲಿತರಿಗೆ, ಅಂಗವಿಕಲರಿಗೆ ಉಚಿತ ಸೇವೆ ಸಲ್ಲಿಸುತ್ತಿರುವುದು ಹೆಚ್ಚು ಆನಂದ ತರಿಸಿದೆ ಎನ್ನುತ್ತಾರೆ ಡಾ. ಆಂಜನಪ್ಪ.
ಸಾಧನೆಗಳು…
- 2012ರ ಪ್ರತಿಷ್ಟಿತ ಕೆಂಪೇಗೌಡ ಪ್ರಶಸ್ತಿ.
- 2014ರ ಪ್ರತಿಷ್ಟಿತ ಡಾ. ಬಿ.ಸಿ ರಾಯ್ ಪ್ರಶಸ್ತಿ.
- 25ಕ್ಕೂ ಹೆಚ್ಚು ಸಂಘಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿ ಸ್ವೀಕಾರ.
- 2019ರ ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
- ಎರಡು ಬಾರಿ ಬೆಸ್ಟ್ ಟೀಚರ್ ಪ್ರಶಸ್ತಿ.
- ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಣೆ ಮತ್ತು ಅಧ್ಯಕ್ಷತೆ.
- 1987ರಲ್ಲಿ ಒಂದೇ ರಾತ್ರಿ, ಬೌರಿಂಗ್ ಆಸ್ಪತ್ರೆಯಲ್ಲಿ ಗೋಲಿಬಾರ್‌ನಲ್ಲಿ ಗುಂಡೇಟಿನ ಹೊಡೆತದ 10 ಯುವಕರಿಗೆ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.
- 23 ಕೆ.ಜಿ. ತೂಕದ ಟ್ಯೂಮರ್ ಅನ್ನು 50 ವರ್ಷದ ಮಹಿಳೆ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
- ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಡಾ. ಎಂ.ಜಿ.ಆರ್. ವಿಶ್ವವಿದ್ಯಾಲಯ, ತಮಿಳುನಾಡು ಇನ್ನೂ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಗ್ಸಾಮಿನರ್ (ಪರಿವೀಕ್ಷಕರು) ಸೇವೆ ಸಲ್ಲಿಕೆ.
- 1994ರಲ್ಲಿ ಲಂಡನ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಪ್ರಕಟಣೆ ಮತ್ತು ಸನ್ಮಾನ.
ಸಾಮಾಜಿಕ ಕಳಕಳಿ…
- ಸಮಾಜ ಸಂಪರ್ಕ ವೇದಿಕೆ, ಚಿನ್ಮಯ ಸೇವಾ ಸಂಘದ ಗೌರವಾಧ್ಯಕ್ಷರು ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷರಾಗಿ 1500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ.
- ತಮ್ಮ ಹಾಸ್ಯಭರಿತ ಭಾಷಣಗಳಿಂದ ಅನೇಕ ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ 800 ಕ್ಕೂ ಹೆಚ್ಚು ಆರೋಗ್ಯದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ.
- ಉದಯ, ಟಿ.ವಿ. 9, ಪಬ್ಲಿಕ್ ಟಿ.ವಿ., ಈ ಟಿ.ವಿ. ಕನ್ನಡ, ಸುವರ್ಣ ವಾಹಿನಿ ಮತ್ತು ಆಕಾಶವಾಣಿಯಲ್ಲಿ ಅನೇಕ ಜನಪ್ರಿಯ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
- ಶ್ರೀ ಶಾರದ ಮತ್ತು ಚೇತನ ವಿದ್ಯಾಸಂಸ್ಥೆಯ ಅಧ್ಯಕ್ಷರು, ದೊಡ್ಡಬಳ್ಳಾಪುರ
Dr. T H Anjanappa is a Gastroenterologist and General Surgeon in Rajajinagar, Bangalore Dr. T H Anjanappa practices at Mamatha Nursing Home in Rajajinagar, Bangalore, and Dr. T H Anjanappa’s Clinic in Rajajinagar, Bangalore. He completed MBBS from Vijayanagara Institute of Medical Sciences (VIMS), Bellary in 1979, and MS – General Surgery from Karnataka Institute of Medical Sciences, Hubli, (KIMS) in 1983.
He is a member of the Indian Medical Association (IMA) and Surgical Society.


